ಸಕ್ಷಮ್ – 2021
ಭಾರತ ಘನ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ನಡೆಸಲಾದ ಒಂದು ತಿಂಗಳ ಅವಧಿಯ ಸಂರಕ್ಷಣಾ ಅಭಿಯಾನವಾದ “ಸಕ್ಷಮ್ - 2021” ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಪಿಇಎಸ್ಐಟಿಎಂ ವಿದ್ಯಾಸಂಸ್ಥೆಯಲ್ಲಿ ದಿನಾಂಕ 10/02/2021 ರಂದು ಮೆಕ್ಯಾನಿಕಲ್ ವಿಭಾಗ ಕಾಲೇಜು ಎನ್ಎಸ್ಎಸ್ ಘಟಕ ಹಾಗೂ ಸುಚೇತನಾ ಕ್ಲಬ್ ನ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ಹಸಿರು ಇಂಧನ ಅಭಿಯಾನ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂರಕ್ಷಣಾ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು ಪಿಇಎಸ್ಐಟಿಎಂ ವಿದ್ಯಾಸಂಸ್ಥೆಯಲ್ಲಿ ಸಾಕಾರ ಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ [...]